



Previous
Next
ಪ್ರಶಂಸೆ
ಒಂದುವರೆ ದಶಕಗಳ ಹಿಂದೆ ಶಿಕ್ಷಣ ಲೇಖಕರಿಗೆ ನಮ್ಮ ಕರ್ನಾಟಕದಲ್ಲಿ ಶಿಕ್ಷಣ ಪತ್ರಿಕೆಗಳು ಇರಲಿಲ್ಲ. ಇಲ್ಲಿಯ ವಿದ್ಯಾರ್ಥಿಗಳಿಗೆ ಅಂದರೆ ಎಂ.ಫಿಲ್.. ಪಿಎಚ್ಡಿ, ಹಾಗೂ ಉಪನ್ಯಾಸಕರಿಗೆ ಸಂಶೋಧನ ಲೇಖನಗಳು, ಲೇಖನಗಳು ಪ್ರಕಟಿಸಲು ಒಂದು ಪತ್ರಿಕೆ ಬೇಕು ಎಂದು ಡಾ.ಎನ್.ಬಿ.ಕೊಂಗವಾಡ ಮತ್ತು ಡಾ.ಎಸ್.ಬಿ.ಯಾದವಾಡ ಅವರು ಹೇಳಿದಾಗ ತುಂಬಾ ಖುಷಿಯಿಂದ ಒಪ್ಪಿಕೊಂಡು ಅವರ ಪ್ರಯತ್ನದ ಫಲವಾಗಿ ನಮ್ಮ ಪ್ರಕಾಶನದಿಂದ ಈ ಪತ್ರಿಕೆಗಳು ಲೋಕಾರ್ಪಣೆಗೊಂಡವು. ಇದರ ಉಪಯೋಗವನ್ನು ಇಂದು ಎಲ್ಲ ಶಿಕ್ಷಣ ಆಸಕ್ತರು. ಉಪನ್ಯಾಸಕರು, ವಿದ್ಯಾರ್ಥಿಗಳು, ಸಂಶೋಧಕರು ಪಡೆದುಕೊಳ್ಳುತ್ತಿರುವುದು ನಮ್ಮೆಲ್ಲರ ಶ್ರಮ ಸಾರ್ಥಕವಾಯಿತು.
"ಶಿಕ್ಷಣ ಸೌಧ" ಪತ್ರಿಕೆಯು ಗುಣಮಟ್ಟದ ಶಿಕ್ಷಣ ಕ್ಷೇತದ ನಾವಿನ್ಯ ಆಲೋಚನೆ, ಸಂಶೋಧನೆಗಳಿಗೆ ಹಾಗೂ ಯುವ ಲೇಖಕರಿಗೆ ತಮ್ಮ ಲೇಖನಗಳನ್ನು ಪ್ರಕಟಿಸುವಲ್ಲಿ 2011 ರಿಂದ ನಿರತವಾಗಿದೆ. ಈ ಪತ್ರಿಕೆಯು ಸೈದ್ಧಾಂತಿಕ, ಸಂಶೋಧನೆ ಹಾಗೂ ಶಿಕ್ಷಣ ತಜ್ಞರುಗಳ ಲೇಖನಗಳನ್ನು ಒಳಗೊಂಡಿದೆ.
ಶಿಕ್ಷಣ ಕ್ಷೇತ್ರದ ಪ್ರಸ್ತುತ, ಹೊಸ-ಹೊಸ ವಿಚಾರಗಳ, ಮತ್ತು ಸಂಶೋಧನೆಗಳ ಫಲಶೃತಿಗಳನ್ನು ಅಭಿವ್ಯಕ್ತಿಗೊಳಿಸುವ ವೇದಿಕೆಯಾಗಿ ನಮ್ಮ 'ಶಿಕ್ಷಣ ಸೌಧ' ಪತ್ರಿಕೆಯು ಸಂಶೋಧನಾರ್ಥಿಗಳಿಗೆ, ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶ ನೀಡುತ್ತಿದೆ.
ವಿಧಾನ ಸೌಧವು ಕರ್ನಾಟಕದ ವಿಧಾನ ಮಂಡಲದ ಸಭೆ ನಡೆಯುವ ಕಟ್ಟಡವಾಗಿದ್ದರೆ, ನಾಡಿನ ವಿದ್ಯಾನಿಧಿ ‘ಶಿಕ್ಷಣ ಸೌಧ’ವು ತ್ರೈಮಾಸಿಕ ಶಿಕ್ಷಣ ಮತ್ತು ಸಂಶೋಧನಾ ಪತ್ರಿಕೆಯಾಗಿದೆ. ಈ ಪತ್ರಿಕೆಗೆ ಭಾರತ ಸರ್ಕಾರದ ವಿಶ್ವವಿದ್ಯಾಲಯ ಧನಸಹಾಯ ಆಯೋಗವು ತನ್ನ Consortium for Academic and Research Ethics (CARE) ಪಟ್ಟಿಯಲ್ಲಿ ಮಾನ್ಯತೆ ನೀಡಿದೆ. ಈ ಪತ್ರಿಕೆಯು ಜನಪರ ಜ್ಞಾನ-ವಿಜ್ಞಾನದ ಶೈಕ್ಷಣಿಕ ಸೌಧವಾಗಿ ಸೇವೆ ಸಲ್ಲಿಸುತ್ತಲಿದೆ.
ಕನ್ನಡದಲ್ಲಿ ತಮ್ಮ ಸಂಶೋಧನಾ ಲೇಖನಗಳನ್ನು ಪ್ರಕಟಿಸಲು ಸಾಧ್ಯವಾಗದ ಸಂದರ್ಭದಲ್ಲಿ ಪ್ರಾರಂಭಗೊಂಡ ಈ ಪತ್ರಿಕೆಯು ಸಂಶೋಧನಾ ವಿದ್ಯಾರ್ಥಿಗಳಿಗೆ ಮತ್ತು ಪ್ರಾಧ್ಯಾಪಕರಿಗೆ ಕನ್ನಡದಲ್ಲಿ ತಮ್ಮ ಸಂಶೋಧನಾ ಲೇಖನಗಳನ್ನು ಪ್ರಕಟಿಸಲು ಉಪಯುಕ್ತವಾಗಿದೆ. ಸೈದ್ದಾಂತಿಕ ವಿಚಾರಗಳನ್ನು ಒಳಗೊಂಡ ಶಿಕ್ಷಣ ತಜ್ಞರ ಕನ್ನಡ ಲೇಖನಗಳು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ತಮ್ಮ ಸಂಶೋಧನಾ ಚಟುವಟಿಕೆಯಲ್ಲಿ ಹೊಸ ಚಿಂತನೆಗಳನ್ನು ಸೃಷ್ಠಿಸುತ್ತಿವೆ.
ಶಿಕ್ಷಣ ರಂಗದಲ್ಲಿ ಬರವಣಿಗೆಯ ಕ್ರಾಂತಿಕಾರಿ ಅಲೆಯನ್ನು ಸೃಷ್ಟಿಸಿದ, ಸಂಶೋಧನೆ ಮತ್ತು ಶಿಕ್ಷಣದ ಅತ್ಯುತ್ತಮ ಲೇಖನಗಳನ್ನು ಪ್ರಕಟಿಸುತ್ತಾ ಶಿಕ್ಷಕರಿಗೆ ಮತ್ತು ಸಂಶೋಧನಾರ್ಥಿಗಳಿಗೆ ಯುಜಿಸಿ ಮಾನ್ಯತೆ ಪಡೆದ ಕನ್ನಡದ ನಿಯತಕಾಲಿಕೆಯಲ್ಲಿ ಲೇಖನಗಳನ್ನು ಪ್ರಕಟಿಸಲು ಅನುವು ಮಾಡಿಕೊಟ್ಟ ಶಿಕ್ಷಣಸೌಧ ನಾಡಿನ ಎಲ್ಲ ಸಂಶೋಧಕರಿಗೆ ಚಿರಪರಿಚಿತ. ಸಂಶೋಧನಾ ಹರಿವಿಗೆ ಕಾರಣಕರ್ತರಾದ ಪ್ರಕಾಶಕರು ಹಾಗೂ ಸಂಪಾದಕೀಯ ಮಂಡಳಿಗೆ ಅಭಿನಂದನೆಗಳು. ಜ್ಞಾನ ರೂಪಿಸುವ ಸಂಶೋಧನಾ ಸೌಧವಾಗಿ ಹೀಗೆ ಮುಂದುವರಿಯಲಿ ಎನ್ನುವ ಆಶಯದೊಂದಿಗೆ...
Previous
Next
Join Mailing List
Stay Updated with Our Latest News and Special Offers!